
ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ, ಅಧಿಕಾರ ಅವಧಿಗೆ ಮುಂಚಿತವಾಗಿಯೆ ನಂದಿನಿ ಕರ್ನಾಟಕದ ಗರ್ವ ಎಂದು ಅಭೀಯಾನ ನಡೆಸಿದ್ದು, ಇದೀಗ ಅಮೂಲ್ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಟ್ಟಿದೆ, ಇದು ಕನ್ನಡಿಗರು ಹಾಗೂ ಕನ್ನಡಪರ ಹೋರಾಟಗಾರರಲ್ಲಿ ಆಕ್ರೋಶದ ಕಿಡಿಗೆ ಕಾರಣವಾಗಿದೆ.
ನಮ್ಮ ಭಾಷೆ, ನಮ್ಮ ಕನ್ನಡಿಗರು, ಸಂಸ್ಕೃತಿ ಬಗ್ಗೆ ಹೇಳಿದ್ದು ಚುನಾವಣೆಗೆ ನಡೆಸಿದ ಕುತಂತ್ರವೇ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ಕನ್ನಡದ ಉತ್ಪನ್ನ ಗಳಿಗೆ ಮೊದಲ ಆಧ್ಯತೆ ನೀಡಬೇಕು ಹಾಗೂ ನಂದಿನಿ ಮತ್ತು ನಂದಿನಿ ಉತ್ಪನ್ನಗಳು ಸ್ವಂತ ಬೇಡಿಕೆಗಳನ್ನು ಸೃಷ್ಟಿಸಿದ್ದು, ವಿಶ್ವದಾದ್ಯಂತ ಜನರು ಬಳಸುತ್ತಿದ್ದಾರೆ. ಆದರೆ ಸರ್ಕಾರ ಇತರಭಾಷೆಗೆ ಪ್ರೋತ್ಸಾಹ ನಿಡುತ್ತಿರುವುದು ಕೆಂಗಣ್ಣಿಗೆ ಗುರಿಯಾಗಿದೆ.