
ಕರ್ನಾಟಕದ ಚಿಕ್ಕಬಳ್ಳಾಪುರದ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ೭ ವಿದ್ಯಾರ್ಥಿಗಳು ಇರಾನ್ನ ರಾಜಧಾನಿಯಾದ ಟೆಹರಾನ್ನಲ್ಲಿ ಸಿಲುಕಿಕೊಂಡಿದ್ದು. ಅವರನ್ನು ಸುರಕ್ಷಿತವಾಗಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳು ಜೀವ ಭಯದಿಂದ ಭಯಭೀತರಾಗಿದ್ದು, ಅವರನ್ನು ಸಂರಕ್ಷಣಾ ಸ್ಥಳಕ್ಕೆ ವರ್ಗಾಯಿಸುವಂತೆ ಕೋರಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮದ ಹಬೀಬ್ ರಾಜಾ, ಶಬೀರ್ ಅಲಿ, ಇಲ್ಹಾನ್ ಅಲಿ, ಇರ್ಫಾನ್ ಹೈದರ್ , ರಾಜಾ ಅಬ್ಬಾಸ್, ಹಬೀಬ್, ನಕೀರ್ ರಾಜಾ ಎಂದು ತಿಳಿದು ಬಂದಿದೆ