
ಬೆಂಗಳೂರು: ಸಿಇಟಿ ಪ್ರವೇಶ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ಅಭ್ಯರ್ಥಿಗಳ ಜನಿವಾರ (ಯಜ್ಞೋಪವೀತ) ತೆಗೆಸಿದ ಮತ್ತು ತುಂಡರಿಸಿದ ಘಟನೆಗಳು ವಾರ್ತಾಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದ್ದು, ಮಲೆನಾಡು ವಿಪ್ರವೇದಿಕೆ ಬೆಂಗಳೂರು ಸಂಘಟನೆಯು ಇಂತಹ ಹೇಯ ಕೃತ್ಯವನ್ನು ಕಟುವಾಗಿ ಖಂಡಿಸುತ್ತದೆ.
ಯಜ್ಞೋಪವೀತ ಮತ್ತು ಬ್ರಹ್ಮೋಪದೇಶ ಇವುಗಳ ಪವಿತ್ರತೆಯ ಅರಿವಿಲ್ಲದ ಅಥವಾ ಅರಿವಿದ್ದು ಇವರೇನು ಮಾಡಿಯಾರು ಎಂಬ ಮನೋಭಾವದಿಂದ ಈ ಕೃತ್ಯ ಎಸಗಿರಬಹುದು. ಯಾವುದೇ ಧಾರ್ಮಿಕ ಆಚರಣೆ ಪ್ರಜೆಗಳ ಹಕ್ಕು ಎಂದು ಸಂವಿಧಾನವು ಪ್ರತಿಪಾದಿಸುತ್ತದೆ. ಅಂಥಹದರಲ್ಲಿ ನಮ್ಮ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು. ನಮ್ಮ ಸಹನೆ ಮತ್ತು ಸಹಿಷ್ಣುತೆಯನ್ನು ದೌರ್ಬಲ್ಯ ಎಂದು ಪರಿಭಾವಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಲೆನಾಡು ವಿಪ್ರ ವೇದಿಕೆ ಬೆಂಗಳೂರು ಸಂಘಟನೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ಈ ಮೂಲಕ ಎಚ್ಚರಿಸಿದ್ದಾರೆ.
ಸರ್ಕಾರವು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಇಂಥಹ ಕೃತ್ಯ ಎಸೆದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಬೇಕೆಂದು ಮಲೆನಾಡು ವಿಪ್ರವೇದಿಕೆ ಆಗ್ರಹಿಸುತ್ತದೆ. ಕೇವಲ ಕಣ್ಣೊರೆಸುವ ಕಾರ್ಯಮಾಡದೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಜೈಟಿವಿ ಮೂಲಕ ಕೋರಿದ್ದಾರೆ.