
ಶೃಂಗೇರಿ: ಹಿರಿಯರೂ, ಶಿಕ್ಷಕರೂ ಆದ ಶೃಂಗೇರಿಯ ಹೆಮ್ಮನೆ ಶಂಕರ್ ಮಾಸ್ಟರ್ ಇಂದು ಮುಂಜಾನೆ ಸ್ವರ್ಗಸ್ಥರಾಗಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಹೆಮ್ಮನೆ ರುದ್ರ ಭೂಮಿಯಲ್ಲಿ ಸಂಜೆ ಐದು 5.00 ಗಂಟೆಗೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ. ಸರ್ಕಾರಿ ಪ್ರೌಢಶಾಲೆಯಲ್ಲಿ (ಗುಡ್ಡದ ಹೈಸ್ಕೂಲ್) ಸೇವೆ ಸಲ್ಲಿಸಿದ್ದ ಇವರು ಅನೇಕ ವಿದ್ಯಾರ್ಥಿಗಳ ಬದುಕಿನ ಬೆಳಕಾಗಿದ್ದರು. ಇಂದು ಕುಟುಂಬಸ್ಥರು ವಿದ್ಯಾರ್ಥಿ ಬಂಧುಗಳನ್ನು ಅಗಲಿರುವುದು ವಿಷಾದನೀಯ.