ಹುಬ್ಬಳ್ಳಿ: ಬೆಂಗಳೂರಿನ ಶ್ರೀ ಗಾಯತ್ರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟಪೂರ್ವ ನಿರ್ದೇಶಕರಾದ ಬಿ.ಎಸ್. ರಾಘವೇಂದ್ರ ಭಟ್ ಅವರು ಹುಬ್ಬಳ್ಳಿಯಲ್ಲಿ ಉತ್ತರಾದಿ ಮಠದ ಶ್ರೀ 1008 ಸತ್ಯಾತ್ಮ ತೀರ್ಥ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕೇರಳದ ಪುರಾಣ ಪ್ರಸಿದ್ಧ ನೆಲ್ಲುವಾಯಿ ಶ್ರೀ ಧನ್ವಂತರಿ ಕ್ಷೇತ್ರದ ಶ್ರೀ ಧನ್ವಂತರಿ ದೇವರ ಪ್ರಸಾದವನ್ನು ಶ್ರೀಗಳಿಗೆ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಶ್ರೀ ಸತ್ಯಾಧ್ಯಾನಾಚಾರ್ ಕಟ್ಟಿ, ಖ್ಯಾತ ಜ್ಯೋತಿಷಿ ಹಾಗೂ ವಿದ್ವಾಂಸರಾದ ಡಾ. ಪ್ರಸನ್ನಾಚಾರ್ ಕಟ್ಟಿ, ಪುರೋಹಿತ ಪರಿಷತ್ ಧಾರವಾಡ ಜಿಲ್ಲಾ ಅಧ್ಯಕ್ಷರಾದ ವೇ.ಮೂ. ವಿನಾಯಕ ತಾಪಸ, ಕಾರ್ಯದರ್ಶಿ ವೇ.ಮೂ. ಗುರುರಾಜ ಜೋಶಿ ಹಾಗೂ ಸದಸ್ಯರಾದ ವೇ.ಮೂ. ಕಮಲೇಶ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
