
ಕೊಟ್ಟಿಗೆಹಾರ : ರೈತ ಸಂಪರ್ಕ ಕೇಂದ್ರ, ಬಣಕಲ್ (ಆರ್ಎನ್ಆರ್) ವತಿಯಿಂದ ರೈತರಿಗೆ ಬತ್ತದ ಬೀಜ ಹಾಗೂ ಪ್ರೋಮ್ ವರ್ಮಿ ಕಂಪೋಸ್ಟ್ ಅನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಸುಮ ಮಾತನಾಡಿ, ರೈತರು ಸರ್ಕಾರದ ವಿವಿಧ ಕೃಷಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಇಲಾಖೆಯಿಂದ ದೊರೆಯುವ ಗುಣಮಟ್ಟದ ಕೃಷಿ ಪರಿಕರಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ದಾಸ್ತಾನು ನಿರ್ವಾಹಕ ಪ್ರದೀಪ್, ತಾಂತ್ರಿಕ ಸಹಾಯಕಿ ಶ್ವೇತಾ ಹಾಗೂ ರೈತರು ಉಪಸ್ಥಿತರಿದ್ದು, ಯೋಜನೆಯಡಿ ವಿತರಿಸಲಾದ ಬತ್ತದ ಬೀಜ ಮತ್ತು ಪ್ರೋಮ್ ವರ್ಮಿ ಕಂಪೋಸ್ಟ್ ಅನ್ನು ಪಡೆದುಕೊಂಡರು.




