
ನಮ್ಮ ಇಡೀ ಭಾರತ ದೇಶವು 79ನೇ ಸ್ವಾತಂತ್ರ್ಯದ ಸಂಭ್ರಮಾಚರಣೆಯಲ್ಲಿದ್ದು, ಅತ್ಯಂತ ಹೆಮ್ಮೆಯಿಂದ ಆಚರಣೆ ಮಾಡಲಾಗುತ್ತಿದೆ. ಎರಡು ಶತಮಾನಗಳ ಕಾಲ ಬ್ರಿಟೀಷರು ಭಾರತವನ್ನು ಆಳಿದ್ದು, ಆಗಸ್ಟ್ 15, 1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯಕ್ಕಾಗಿ ವೀರ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸುವ ಸಲುವಾಗಿ ದೇಶಾದ್ಯಂತ ಪ್ರತೀ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.
ಬ್ರಿಟೀಷರನ್ನು ಭಾರತವನ್ನು ಬಿಟ್ಟು ತೊಲಗಿಸಲು ನೇತಾಜಿ ಸುಭಾಶ್ ಚಂದ್ರ ಭೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತ್ ಸಿಂಗ್, ಲಾಲಾ ಲಜಪತ್ ರಾಯ್, ಬಾಲಗಂಗಾಧರ್ ತಿಲಕ್ರಂತಹ ಅದೆಷ್ಟೋ ಮಹಾನ್ ನಾಯಕರು ಹೋರಾಡಿದ್ದಾರೆ.
79ನೇ ಸ್ವಾತಂತ್ರ್ಯ ದಿನವು ದೇಶದೆಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಜೊತೆಗೆ ಈ ದಿನದಂದು ಸರ್ಕಾರಿ ಕಛೇರಿ, ಸಂಸ್ಥೆ, ಶಾಲಾ-ಕಾಲೇಜುಗಳಲ್ಲಿ ಧೈರ್ಯ, ತ್ಯಾಗ, ಬಲಿದಾನ, ಶಾಂತಿ ಹಾಗೂ ಬಾಂಧವ್ಯವನ್ನು ಸಾರುವ ಸಂಕೇತಾಗಿ ತ್ರಿವರ್ಣ ದ್ವಜವನ್ನು ಹಾರಿಸಲಾಗುತ್ತದೆ.