ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಪ್ರಾಯೋಜಿಸಲ್ಪಟ್ಟ ಸರಕಾರಿ ಪಾಲಿಟೆಕ್ನಿಕ್, ಕಾರ್ಕಳ ಇದರ ರೋಟ್ರಾಕ್ಟ ಕ್ಲಬ್ ಪದಗ್ರಹಣ ಸಮಾರಂಭವು ದಿನಾಂಕ 26.10.2024ರಂದು ನೆರವೇರಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕುಮಾರ ಕೆ ಎಂ ವಹಿಸಿದ್ದರು, ರೋಟರಿ ಜಿಲ್ಲಾ ರೋಟ್ರಾಕ್ಟ್ ಚೇರ್ಮನ್ ನವೀನ್ ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು, ಅತಿಥಿಗಳಾಗಿ ರೋಟರಿ ಕ್ಲಬ್ ಕಾರ್ಕಳ ರಾಕ್ಸಿಟಿಯ ಅಧ್ಯಕ್ಷ ಉಪೇಂದ್ರ ವಾಗ್ಲೆ, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ರೋಟ್ರಾಕ್ಟ್ ಚೇರ್ಮನ್ ಚಿರಾಗ್ ರಾವ್, ಜಿಲ್ಲೇಯ ಡಿಆರ್ಆರ್ ಚೇತನ್ ಕುಮಾರ್ ಭಾಗವಹಿಸಿದ್ದರು. ನೂತನ ರೋಟರಿ ಕ್ಲಬ್ ಅಧ್ಯಕ್ಷ ವರುಣ್ ಕುಮಾರ್, ನೂತನ ಕಾರ್ಯದರ್ಶಿ ಮಹೇಶ ನಾಯ್ಕ ಪದಗ್ರಹಣ ಸ್ವೀಕರಿಸಿದರು. ಟೀಚರ್ ಕೋ ಆರ್ಡಿನೇಟರ್ ಚಿತ್ರ ಕುಮಾರ್ ಕೆ.ವಿ. ಇವರುಣ್ ಕುಮಾರ್, ನೂತನ ಕಾರ್ಯದರ್ಶಿ ಮಹೇಶ ನಾಯ್ಕ ಪದಗ್ರಹಣ ಸ್ವೀಕರಿಸಿದರು. ಟೀಚರ್ ಕೋ ಆರ್ಡಿನೇಟರ್ ಚಿತ್ರ ಕುಮಾರ್ ಕೆ.ವಿ. ಇವರು ಸ್ವಾಗತಿಸಿದರು, ಕಾಲೇಜು ಕಛೇರಿ ಅಧೀಕ್ಷಕರು ಶ್ರೀ ವಾಸುದೇವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕಾರ್ಕಳ ಇದರ ಕಾರ್ಯದರ್ಶಿ ಪ್ರಶಾಂತ್ ಜೈನ್, ಪೂರ್ವಾಧ್ಯಕ್ಷರು ಸುರೇಂದ್ರ ನಾಯಕ್, ಸುರೇಶ್ ನಾಯಕ್ ಮತ್ತು ಸದಸ್ಯರು ಅಬ್ದುಲ್ ರೆಹಮಾನ್ ಮತ್ತು ಗೀತಾ ರಾವ್ ಭಾಗವಹಿಸಿದ್ದರು. ಕಾಲೇಜು ಉದ್ಯೋಗಿ ಶ್ರೀ ಗುಣಪಾಲ ಜೈನ್ ವಂದಿಸಿದರು, ಕಾಲೇಜು ಉಪನ್ಯಾಸಕರಾದ ಕುಮಾರಿ ಶಿವಾನಿ ಕಾರ್ಯಕ್ರಮದ ನಿರುಪಣೆಯನ್ನು ಮಾಡಿದರು.


