
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2025ನೇ ಜನವರಿ18 & 19 ರಂದು ಹಮ್ಮಿಕೊಂಡಿರುವ 11ನೇ ಬ್ರಾಹ್ಮಣ ಮಹಾ ಸಮ್ಮೇಳನ ಸುವರ್ಣ ಮಹೋತ್ಸವ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಕೋಟಿ ಗಾಯತ್ರಿ ಜಪ ಯಜ್ಞದ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ತ್ರಿಮತಸ್ಥ ವಿಪ್ರ ಬಾಂಧವರು ಪ್ರತಿನಿತ್ಯ ಕನಿಷ್ಠ108 ಗಾಯತ್ರಿ ಜಪವನ್ನುಅನುಷ್ಠಾನ ಮಾಡಬೇಕೆಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿದುಶೇಖರ ಭಾರತಿ ಸನ್ನಿಧಾನಂಗಳವರು ಅಪ್ಪಣೆ ಮಾಡಿ ಯಾಗದ ಆಹ್ವಾನ ಪತ್ರಿಕೆಯನ್ನು ಅನುಗ್ರಹಿಸಿ ಬಿಡುಗಡೆ ಮಾಡಿದರು.