
ಜಾರ್ಖಂಡ್: ಕುಂತಿ ಎಂಬಲ್ಲಿ 2007ರಲ್ಲಿ1.30 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಆದರೆ ಈ ಸೇತುವೆ ಈಗ ಕುಸಿದಿದ್ದು ಅಲ್ಲಿನ ಕುಂತಿ ಕೇಂದ್ರ ಕಚೇರಿ ಮತ್ತು ರಾಂಚಿ ನಡುವಿನ ಸಂಪರ್ಕ ಕಡಿತಗೊಂಡಿದ್ದರಿಂದ12 ಗ್ರಾಮಗಳ ಜನರಿಗೂ ಮತ್ತು ಪೆಲೋಲ್ನ ಸರ್ಕಾರಿ ಪ್ರೌಢಶಾಲೆ ಹಾಗೂ ಮಿಷನರಿ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಬಾರಿ ಸಮಸ್ಯೆಯನ್ನುಂಟು ಮಾಡಿದೆ. ಇಂತ ಸಮಯದಲ್ಲೂ ಛಲ ಬಿಡದ10ನೇ ತರಗತಿ ವಿದ್ಯಾರ್ಥಿನಿ ಈಜಿ ತನ್ನ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾಳೆ.
” ನನಗೆ ಬೇರೆ ದಾರಿಯಿಲ್ಲದೆ, ಈಜುವಾಗ ಪುಸ್ತಕಗಳ ಚೀಲವನ್ನು ತಲೆ ಮೇಲೆ ಇಟ್ಟುಕೊಂಡಿದ್ದೆ, ಆದರೆ ನನ್ನ ಬಟ್ಟೆಗಳೆಲ್ಲಾ ಒದ್ದೆಯಾಗಿತ್ತು. ಅದಕ್ಕೆ ಒಂದು ಜೊತೆ ಹೆಚ್ಚಿನ ಬಟ್ಟೆ ಇಟ್ಟುಕೊಂಡು ತೆರಳುತ್ತಿದ್ದೆ” ಎಂದು ಆ ವಿದ್ಯಾರ್ಥಿನಿ ತನ್ನ ನೋವನ್ನು ವ್ಯಕ್ತಪಡಿಸುತ್ತಾಳೆ. ಪಕ್ಕದಲ್ಲೇ ಇನ್ನೊಂದು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ,ಎಂದು ಕುಂತಿ ಉಪ ವಿಭಾಗದ ಅಧಿಕಾರಿ ದೀಪೇಶ್ಕುಮಾರ್ ಅವರು ಭರವಸೆ ನೀಡಿದ್ದಾರೆ.
ಈ ಘಟನೆಗೆ ಇಂಡಿಯಾ ಇಸ್ ಶೈನಿಂಗ್ ಬಟ್ ಇಂಡಿಯನ್ಸ್ ಆರ್ ಬರ್ನಿಂಗ್ ಎನ್ನುವ ಮಾತು ಸಾಕ್ಷಿಯಾಗಿದೆ.