ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2025ನೇ ಜನವರಿ18 & 19 ರಂದು ಹಮ್ಮಿಕೊಂಡಿರುವ 11ನೇ ಬ್ರಾಹ್ಮಣ ಮಹಾ ಸಮ್ಮೇಳನ ಸುವರ್ಣ ಮಹೋತ್ಸವ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಕೋಟಿ ಗಾಯತ್ರಿ ಜಪ ಯಜ್ಞವನ್ನು ಬೆಂಗಳೂರಿನ ಗಾಯತ್ರಿ ಭವನದಲ್ಲಿ ಮಾಡಲು ನಿರ್ಧರಿಸಿದ್ದು, ಈ ಸುಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾದ್ಯಕ್ಷರಾದ ವೇದಮೂರ್ತಿ ಡಾ ಬಿಎಸ್ ರಾಘವೇಂದ್ರ ಭಟ್, ಉಪಾಧ್ಯಕ್ಷರಾದ ಶ್ರೀ ರಾಜೇಂದ್ರ ಪ್ರಸಾದ್ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ರವಿಶಂಕರ್, ಅರುಣ್ ಕುಮಾರ್ ವೈ.ಜಿ ರಾಘವೇಂದ್ರರವರು ಉಡುಪಿ ಪೇಜಾವರ ಶ್ರೀಗಳವರ ದರ್ಶನ ಪಡೆದು ಆಶಿರ್ವಾದ ಪಡೆದು ಕಾರ್ಯಕ್ರಮಕ್ಕೆ ಭಕ್ತಿಪೂರ್ವಕವಾಗಿ ಆಮಂತ್ರಿಸಲಾಯಿತು.