
ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಮತ್ತು ಆಕ್ಸಿಯಂ-4 ತಂಡವು ಅಂತಾರಾಷ್ಟೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶೂನ್ಯ ಗುರುತ್ವಾಕರ್ಷಣೆಯ ಹಲವು ಪ್ರಯೋಗಗಳನ್ನು ಪ್ರದರ್ಶಿಸಿ, 433ಗಂಟೆ ಅಥವಾ18 ದಿನಗಳ ಬಳಿಕ ಇಂದು ಡ್ರ್ಯಾಗನ್ ನೌಕೆಯ ಮೂಲಕ ಭಾರತಕ್ಕೆ ಮರಳುತ್ತಿದ್ದಾರೆ.
ಡ್ರ್ಯಾಗನ್ ನೌಕೆ ಐಎಸ್ಎಸ್ನಿಂದ ಅನ್ಡಾಕ್ ಆಗುತ್ತಿದ್ದತಂತೆ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಶುಕ್ಲಾಗೆ ಹಾರೈಸಿದ್ದು, “ಶುಭಾಂಶುಗೆ ಮತ್ತೆ ಸ್ವಾಗತ” ಎಂದಿದ್ದಾರೆ. ಶುಕ್ಲಾರ ಅಂತಾರಾಷ್ಟ್ರೀಯ ಬಾಹ್ಯಾಕಾಶದ ಯಾತ್ರೆ ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಮಹತ್ವದ ಮೆಟ್ಟಿಲಾಗಿರಲಿದೆ. ಇದು ಭಾರತದ ಗಗನಯಾನ ಯೋಜನೆಗಳಿಗೆ ಉತ್ತೇಜನ ನೀಡಲಿದೆ.