Sumatran Tiger, panthera tigris sumatrae, Mother with Cub
ಮೈಸೂರು: ಜಿಲ್ಲೆಯ ಹುಣಸೂರಿನಲ್ಲಿ ಸೆರೆಹಿಡಿದಿದ್ದ ಹೆಣ್ಣು ಹುಲಿಯ ನಾಲ್ಕು ಮರಿಗಳನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಪತ್ತೆ ಹಚ್ಚಿ ರಕ್ಷಿಸಿದೆ. ಗೌಡನಕಟ್ಟೆ ಗ್ರಾಮದಲ್ಲಿ ಸ್ವಲ್ಪ ದಿನಗಳ ಹಿಂದೆ ತಾಯಿ ಹುಲಿಯನ್ನ ಹಿಡಿದು ನಂತರ, ಅದರ ಮರಿಗಳು ಕಾಣೆಯಾಗಿದ್ದರಿಂದ ಹುಡುಕಾಟ ಆರಂಭಿಸಿತ್ತು. ಡ್ರೋನ್ನ ಮೂಲಕ ನಡೆಸಿದ ಪರಿಶೀಲನೆ ವೇಳೆ ಮರಿಗಳು ಜೋಳದ ಹೊಲದಲ್ಲಿ ಹಸಿವಿನಿಂದ ಕಿರುಚಾಡುತ್ತಿದ್ದುದ್ದನ್ನು ಕಂಡು ಸಿಬ್ಬಂದಿ ತಕ್ಷಣ ರಕ್ಷಣೆ ಕಾರ್ಯಾಚರಣೆ ನಡೆಸಿ 3-4 ತಿಂಗಳ ಹುಲಿ ಮರಿಗಳನ್ನು ಸುರಕ್ಷಿತವಾಗಿ ಕೂರ್ಗಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಈ ಯಶಸ್ವಿ ಕಾರ್ಯಚರಣೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
