ಬೆಂಗಳೂರು (ಆ.9): ಭಾನುವಾರ ನಡೆಯಲಿರುವ ಹಳದಿ ಮೆಟ್ರೋ ಮಾರ್ಗ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಮತ್ತು ಸಾವಿರಾರು ಜನರು ಭಾಗವಹಿಸಲಿರುವುದರಿಂದ, ನಗರದಲ್ಲಿ ಕೆಲವು ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 12:00ರವರೆಗೆ ಮಾರೇನಹಳ್ಳಿ ಮುಖ್ಯ ರಸ್ತೆ (ರಾಜಲಕ್ಷ್ಮಿ ಜಂಕ್ಷನ್ನಿಂದ 18ನೇ ಮುಖ್ಯ ರಸ್ತೆ) ಹಾಗೂ ಮಾರೇನಹಳ್ಳಿ ಈಸ್ಟ್ ಎಂಡ್ ಮುಖ್ಯ ರಸ್ತೆ (ಅರವಿಂದ ಜಂಕ್ಷನ್ವರೆಗೆ) ಸಂಚಾರ ನಿರ್ಬಂಧಿಸಲಾಗಿದೆ. ಇದೇ ರೀತಿಯಾಗಿ, ಬೆಳಿಗ್ಗೆ 9:30ರಿಂದ ಮಧ್ಯಾಹ್ನ 2:30ರವರೆಗೆ ಸಿಲ್ಕ್ ಬೋರ್ಡ್–ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್, ಹೊಸೂರು ರಸ್ತೆ, ಇನ್ಫೋಸಿಸ್ ಅವೆನ್ಯೂ, ವೇಲಾಂಕಣಿ ರಸ್ತೆ ಮತ್ತು ಹೆಚ್.ಪಿ. ಅವೆನ್ಯೂಗಳಲ್ಲಿ ಸಂಚಾರ ನಿಷೇಧ ಜಾರಿಯಲ್ಲಿರುತ್ತದೆ. ವಾಹನ ಸವಾರರ ಅನುಕೂಲಕ್ಕಾಗಿ ಬನಶಂಕರಿ ಬಸ್ ನಿಲ್ದಾಣ, ಸಾರಕ್ಕಿ ಮಾರ್ಕೆಟ್ ರಸ್ತೆ, ಐ.ಜಿ. ಸರ್ಕಲ್, ಆರ್.ವಿ. ಡೆಂಟಲ್ ಜಂಕ್ಷನ್, ಜಿಗಣಿ ರಸ್ತೆ, ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ ಮತ್ತು ಇತರ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ
