ಬೆಂಗಳೂರು: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈಗಿನ ಮೂರು ಪರೀಕ್ಷೆಗಳ ಬದಲು ಕೇವಲ ಎರಡು ಪರೀಕ್ಷೆಗಳು ಮಾತ್ರ ನಡೆಸುವಂತೆ ಶಿಕ್ಷಣ ಇಲಾಖೆ ಯೋಚಿಸುತ್ತಿದೆ. ಏಕೆಂದರೆ ಉತ್ತೀರ್ಣ ಅಂಕಗಳನ್ನು 35 ರಿಂದ 33ಕ್ಕೆ ಕಡಿತಗೊಳಿಸಿದ್ದು, ಮೊದಲೆರಡು ಪರೀಕ್ಷೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗುತ್ತಿರುವ ಕಾರಣ ಮೂರನೇ ಪರೀಕ್ಷೆಯ ಅಂಕಗಳಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಾಣಿಸುತ್ತಿಲ್ಲ, ಹಾಗಾಗಿ ಮೂರನೇ ಪರೀಕ್ಷೆಯ ಅಗತ್ಯತೆ ಕಡಿಮೆಯಾಗಿದ್ದು, ಅದನ್ನು ಕೈಬಿಡುವ ಯೋಚನೆ ಶಿಕ್ಷಣ ಇಲಾಖೆ ಮಾಡುತ್ತಿವೆ. ಸದ್ಯಕ್ಕೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ-1 ಮತ್ತ್ತು 2ರ ಅಂತಿಮ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಮೂರನೇ ಪರೀಕ್ಷೆಗೆ ಅಧಿಕೃತವಾಗಿ ವಿದಾಯ ನೀಡುವ ನಿರೀಕ್ಷೆಯಿದೆ.
